Posts

ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್‌ಗೆ ದರ್ಶನ್-ಸುದೀಪ್ ಬರ್ತಾರಾ ? ಒಂದಾಗ್ತಾರಾ ? ಪರಭಾಷೆ ನಟರು ಯಾರ್ಯಾರು ಬರ್ತಾರೆ

Image
ಅಪ್ಪುಗಾಗಿ ದರ್ಶನ್-ಸುದೀಪ್ ಒಂದಾಗ್ತಾರಾ? ಸ್ಯಾಂಡಲ್‌ವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳಲ್ಲಿ ದರ್ಶನ್ ಹಾಗೂ ಸುದೀಪ್ ದೋಸ್ತಿ ಬಗೆ ಗೊತ್ತಿಲ್ಲದ ವಿಷಯವೇನು ಇಲ್ಲ. ಕುಚಿಕು ಗೆಳೆಯರಾಗಿದ್ದವರು, ಒಂದೇ ಆತ್ಮ ಎರಡು ದೇಹ ಅಂತಿದ್ದವರು. ಅದ್ಯಾವುದೋ ಕಾರಣಕ್ಕೆ ಇಬ್ಬರೂ ಹಾವು-ಮುಂಗುಸಿಯಂತಾಗಿದ್ದಾರೆ. ಆದರೆ, ಅಭಿಮಾನಿಗಳಿಗೆ ಇಬ್ಬರೂ ಮತ್ತೆ ಒಂದಾಗಬೇಕು. ಒಟ್ಟಿಗೆ ಓಡಾಡಬೇಕು. ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆಯಿದೆ. ಅದಕ್ಕೆ 'ಗಂಧದ ಗುಡಿ' ಪ್ರಿ-ರಿಲೀಸ್ ಕಾರ್ಯಕ್ರಮ ಸಾಕ್ಷಿಯಾಗುತ್ತಾ? ಅನ್ನೋದನ್ನು ಎದುರು ನೋಡುತ್ತಿದ್ದಾರೆ. ಇಬ್ಬರು ಅಭಿಮಾನಿಗಳ ಈ ಆಸೆಗೆ ಅಪ್ಪು ಫ್ಯಾನ್ಸ್‌ ಕಡೆಯಿಂದ ಚಿಕ್ಕದೊಂದು ಸುಳಿವು ಸಿಕ್ಕಿದೆ. ಗಂಧದ ಗುಡಿ'ಯಲ್ಲಿ ದರ್ಶನ್-ಸುದೀಪ್? ಅಕ್ಟೋಬರ್ 21ಕ್ಕೆ ಅದ್ಧೂರಿಯಾಗಿ ನಡೆಯುತ್ತಿರುವ 'ಗಂಧದ ಗುಡಿ' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ದಿಗ್ಗಜರ ಸಮಾಗಮ ಆಗಲಿದೆ. ಸ್ಯಾಂಡಲ್‌ವುಡ್‌ನ ಎಲ್ಲಾ ಗಣ್ಯರಿಗೂ ಆಹ್ವಾನ ನೀಡಲಾಗಿದೆ. ಕರ್ನಾಟದ ಮೂಲೆ ಮೂಲೆಯಲ್ಲಿ ರುವ ಪುನೀತ್ ಅಭಿಮಾನಿಗಳಿಗೂ ಆಹ್ವಾನ ಹೋಗಿದೆ. ಈ ಮಧ್ಯೆ ದರ್ಶನ್ ಹಾಗೂ ಸುದೀಪ್ ಕೂಡ ಆಗಮಿಸುತ್ತಿರೋ ಬಗ್ಗೆ ಸುಳಿವು ಸಿಕ್ಕಿದೆ. 'ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಕಲಾವಿದರೂ, ಕನ್ನಡದ ಟಾಪ್ ಸ್ಟಾರ್‌ಗಳೇನಿದ್ದಾರೆ ಅವರೆಲ್ಲರೂ ಬರುತ್ತಾರೆ. ಯಶ್ ಇರಬಹುದು. ದರ್ಶನ್ ಅವರು ಇರಬಹುದು. ಸುದೀಪ್ ಅವರು ಇರಬಹುದು. ಪ್ರ

ಜೀ ಕನ್ನಡದಲ್ಲಿ ಅಕ್ಟೋಬರ್ 15 ರಂದು ವಿಕ್ರಾಂತ್ ರೋಣ ಚಿತ್ರದ ಅದ್ಧೂರಿ World Television premiere

Image
ಇದೀಗ ಕನ್ನಡದ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡ ಇದೇ ಅಕ್ಟೋಬರ್ 15 ಶನಿವಾರ ರಾತ್ರಿ 7.30ಕ್ಕೆ ಈ ಸಿನಿಮಾವನ್ನು ಅದ್ಧೂರಿಯಾಗಿ World Television premiere ಮಾಡಲಿದೆ.  ಏಕಕಾಲಕ್ಕೆ ಹಲವಾರು ಭಾಷೆಗಳಲ್ಲಿ ತೆರೆಕಂಡು ಅದ್ಭುತ ಯಶಸ್ಸುಗಳಿಸಿರುವ ಈ ಸಿನಿಮಾ ಕೂಡ ಕನ್ನಡ ಚಿತ್ರರಂಗದ ಶಕ್ತಿ ಪ್ರದರ್ಶನ ಮಾಡಿದ ಶ್ರೇಯಸ್ಸನ್ನು ತನ್ನದಾಗಿಸಿಕೊಂಡಿದೆ.ರಂಗೀತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಇದರ ನಿರ್ದೇಶನದ ಜವಾಬ್ಧಾರಿ ಹೊತ್ತು ಯಶಸ್ವಿಯಾಗಿದ್ದರೇ ಜಾಕ್ ಮಂಜು ಅವರು ಹಣಹೂಡಿಕೆ ಮಾಡಿದ್ದಾರೆ. ಚಂದನವನದ ಸದ್ಯದ ಟ್ರೆಂಡ್ ಸೆಟ್ಟಿಂಗ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಹಾಗು ವಿಲಿಯಮ್ ಡೇವಿಡ್ ಅವರ ಭರ್ಜರಿ ಛಾಯಾಗ್ರಹಣವಿದೆ. ಬಹುಕೋಟಿ ವೆಚ್ಚದ ಈ ಚಿತ್ರದ ಹಂಚಿಕೆ ಜವಾಬ್ಧಾರಿಯನ್ನು ದೇಶದ ಅತಿದೊಡ್ಡ ಮನರಂಜನಾ ಸಂಸ್ಥೆಯಾದ ಜೀ ಸ್ಟುಡಿಯೋಸ್ ವಹಿಸಿದಿದ್ದು ವಿಶೇಷ . ಇನ್ನು ವಿಕ್ರಾಂತ್ ರೋಣ ಚಿತ್ರ ಶ್ರೀಮಂತ ತಾರಾಗಣಕ್ಕೆ ಸಾಕ್ಷಿಯಾಗಿದ್ದು ಕಿಚ್ಚ ಸುದೀಪ್ ಸೇರಿದಂತೆ ನಿರೂಪ್ ಭಂಡಾರಿ , ನೀತಾ ಅಶೋಕ್ , ಜಾಕ್ವಲಿನ್ ಫರ್ನಾಂಡಿಸ್ ಹಾಗು ಇನ್ನು ಅನೇಕರು ಇದರ ಭಾಗವಾಗಿದ್ದಾರೆ. ಅಷ್ಟೇ ಅಲ್ಲದೆ ವಿಶ್ವದ ಅತಿದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಕನ್ನಡದ ಬಾವುಟ ಹಾರಿಸಿದ ಹೆಮ್ಮೆಯ ವಿಷಯಕ್ಕೆ ಪಾತ್ರವಾಗಿದೆ ಈ ಚಿತ್ರತಂಡ.  

2500 ಸ್ಕ್ರೀನ್‌ಗಳಲ್ಲಿ ಹಿಂದಿ 'ಕಾಂತಾರ' ರಿಲೀಸ್: ಫಸ್ಟ್ ಡೇ ಬಾಕ್ಸಾಫೀಸ್ ಲೆಕ್ಕಾಚಾರ ಏನು?

Image
  ಬೇರೆ ಭಾಷೆಗಳಲ್ಲಿ 'ಕಾಂತಾರ' ಸಿನಿಮಾ ತೆರೆಗಪ್ಪಳಿಸಲು ಇನ್ನೊಂದೇ ದಿನ ಬಾಕಿ. ಈಗಾಗಲೇ ಬೇರೆ ಭಾಷೆಗಳಲ್ಲಿ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡದಲ್ಲೇ ಹಿಂದಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅಂದಮೇಲೆ ಹಿಂದಿಯಲ್ಲಿ ಬಂದರೆ ಸಹಜವಾಗಿಯೇ ಮುಗಿಬಿದ್ದು ಸಿನಿಮಾ ನೋಡುವ ನಿರೀಕ್ಷೆಯಿದೆ. ಬರೋಬ್ಬರಿ 2500 ಸ್ಕ್ರೀನ್‌ಗಳಲ್ಲಿ ಶುಕ್ರವಾರ 'ಕಾಂತಾರ' ಹಿಂದಿ ವರ್ಷನ್ ರಿಲೀಸ್ ಆಗ್ತಿದೆ. ಈಗಾಗಲೇ 'ಕಾಂತಾರ' ಹಿಂದಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ನಿಧಾನವಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬುಕ್‌ಮೈ ಶೋನಲ್ಲಿ 99% ರೇಟಿಂಗ್ ಪಡೆದಿರುವ ಸಿನಿಮಾದಲ್ಲಿ ಅಂಥಾದ್ದೇನಿದೆ ಎನ್ನುವ ಕುತೂಹಲ ಪರಭಾಷಿಕರಲ್ಲೂ ಮೂಡಿದೆ. 'KGF' ಹಿಂದಿ ವರ್ಷನ್ ವಿತರಣೆ ಹಕ್ಕನ್ನು ಎಎ ಫಿಲ್ಮ್ಸ್ ಸಂಸ್ಥೆ ಖರೀದಿಸಿ ಗೆದ್ದಿತ್ತು. ಅದೇ ಸಂಸ್ಥೆಗೆ 'ಕಾಂತಾರ' ಹಿಂದಿ ವರ್ಷನ್ ವಿತರಣೆ ಹಕ್ಕು ಸಿಕ್ಕಿದೆ. ಹಾಗಾಗಿ ಅನಿಲ್ ತದಾನಿ ಅಂಡ್ ಟೀಂ ದೊಡ್ಡಮಟ್ಟದಲ್ಲಿ ಪ್ರಮೋಷನ್ ಹಾಗೂ ರಿಲೀಸ್ ಪ್ಲ್ಯಾನ್ ನಡೀತಿದೆ. ಕನ್ನಡದ ಮೀಡಿಯಂ ಬಜೆಟ್ ಚಿತ್ರವೊಂದರ ಹಿಂದಿ ವರ್ಷನ್‌ನ 2500 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡೋದು ಅಂದರೆ ತಮಾಷೆ ಮಾತಲ್ಲ 2500 ಸ್ಕ್ರೀನ್‌ಗಳಲ್ಲಿ 'ಕಾಂತಾರ' ಹಿಂದಿ ವರ್ಷನ್ ಇತ್ತೀಚೆಗೆ ಬಾಲಿವುಡ್‌ನಲ್ಲಿ ಒ

Gandhada gudi ಟ್ರೈಲರ್ ನೋಡಿ ಮೆಚ್ಚಿದ ಸುದೀಪ್-ಯಶ್; ಸೆಲೆಬ್ರಿಟಿಗಳ ಟ್ವೀಟ್ ಸುರಿಮಳೆ

Image
ಕರ್ನಾಟಕದಲ್ಲಿ ಮಾತ್ರವಲ್ಲ ವರ್ಲ್ಡ್‌ ವೈಡ್‌ ಸಿಕ್ತು ಪವರ್ ಸ್ಟಾರ್ ಚಿತ್ರಕ್ಕೆ ಸಾಥ್. ಟ್ರೈಲರ್‌ ನೋಡಿ ಫಿದಾ ಆದ ಅಭಿಮಾನಿಗಳು .... ಕನ್ನಡ ಚಿತ್ರರಂಗದ ಯುವರತ್ನ, ಮಾಣಿಕ್ಯ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ಗಂಧದ ಗುಡಿ ಸಿನಿಮಾದ ಟ್ರೈಲರ್ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಅಶ್ವಿನಿ ಪುನೀತ್, ರಾಘವೇಂದ್ರ ರಾಜ್‌ಕುಮಾರ್, ಮಂಗಳಮ್ಮ, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಮತ್ತು ಧಿರೇನ್‌ ರಾಮ್‌ಕುಮಾರ್ ಬಿಡುಗಡೆ ಮಾಡಿದ್ದರು. ಆನಂತರ ಪಿಆರ್‌ಕೆ ಯೂಟ್ಯೂಬ್‌ ಚಾನೆಲ್‌ನಲ್ಲಿ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಅಮೋಘವರ್ಷ ನಿರ್ದೇಶಕದಲ್ಲಿ ಮೂಡಿ ಬಂದಿರುವ ಟ್ರೈಲರ್ ಸೂಪರ್ ಹಿಟ್ ಎನ್ನಬಹುದು.  ಅಪ್ಪು ಕೊನೆ ಸಿನಿಮಾ ಗಂಧದ ಗುಡಿ ಆಗಿರುವುದರಿಂದ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತಾದ್ಯಂತ ಸಾಥ್‌ ಸಿಕ್ಕಿದೆ ಹಾಗೂ ಟ್ರೈಲರ್‌ಗೆ ಮೆಚ್ಚಗೆ ವ್ಯಕ್ತವಾಗುತ್ತಿದೆ. ಸಿನಿಮಾ ಸ್ಟಾರ್‌ಗಳು ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದರು. ಸೆಲೆಬ್ರಿಟಿಗಳು ಟ್ವೀಟ್ ಇಲ್ಲಿದೆ....  

ಕಿಚ್ಚನ ಮುಂದಿನ ಸಿನಿಮಾ ಬಿಲ್ಲರಂಗ ಭಾಷಾ: ಸ್ಪಷ್ಟನೆ ನೀಡಿದ ಸುದೀಪ್..!

Image
ವಿಕ್ರಾಂತ್ ರೋಣ ಸಿನಿಮಾ ಬಳಿಕ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು. ಆದರೆ ಇದೀಗ ಸುದೀಪ್ ಮಾತಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಮುಂದಿನ ಸಿನಿಮಾದ ಹಿಂಟ್ ಕೊಟ್ಟಿದ್ದಾರೆ. ನಟ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಯಶಸ್ಸಿನ ಬಳಿಕ ತಮ್ಮ ಮುಂದಿನ ಸಿನಿಮಾದ ಬಗ್ಗೆ ಎಲ್ಲಿಯೂ ಹೇಳಿರಲಿಲ್ಲ. ಹೀಗಾಗಿ ಕಿಚ್ಚನ ಮುಂದಿನ ಸಿನಿಮಾ ಯಾವುದು ಎಂದು ಗಾಂಧಿನಗರ ಅಷ್ಟೇ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತುಕತೆ ಶುರುವಾಗಿತ್ತು. ಈ ನಡುವೆ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕರ ಜೊತೆಗಿನ ಫೋಟೋ ಕೂಡ ಅಚ್ಚರಿ ಮೂಡಿಸಿತ್ತು. ಆದರೆ ಇದಲ್ಲಕ್ಕೆ ಇದೀಗ ತೆರೆ ಬಿದ್ದಿದ್ದು, ಸುದೀಪ್ ನೆಕ್ಸ್ಟ್ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಸುದೀಪ್ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಬಿಲ್ಲರಂಗ ಭಾಷಾ ಸಿನಿಮಾದ ಸ್ಕ್ರಿಪ್ಟ್ ಬಹುತೇಕ ಫೈನಲ್ ಆಗಿದೆ. ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಶುರುವಾಗಲಿದೆ ಎಂದಿದ್ದಾರೆ.

ಕಾಂತಾರ' ಸಿನಿಮಾ ನೋಡಿ ಮೆಚ್ಚಿದ ಸುದೀಪ್: ರಿಷಬ್‌ ಬಗ್ಗೆ ಹೀಗೆಂದರು

Image
https://youtu.be/UvpsV7Js6jA   ನಟ ಸುದೀಪ್, ಅತ್ಯುತ್ತಮ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಜೊತೆಗೆ ಒಳ್ಳೆಯ ಸಿನಿಮಾಗಳನ್ನು ಹಾಗೂ ಒಳ್ಳೆಯ ಸಿನಿಮಾ ಕರ್ಮಿಗಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅತ್ಯುತ್ತಮ ನಟ, ನಿರ್ದೇಶಕ ಆಗಿರುವ ಸುದೀಪ್, ಒಳ್ಳೆಯ ಸಿನಿಮಾ ವಿಶ್ಲೇಷಕ ಸಹ ಹೌದು. ಉತ್ತಮ ಸಿನಿಮಾಗಳ ಆತ್ಮದ ಬಗ್ಗೆ ಅರಿವಿರುವ ಸುದೀಪ್, ಒಳ್ಳೆಯ ಸಿನಿಮಾಗಳನ್ನು ವೀಕ್ಷಿಸುತ್ತಾರೆ ಹಾಗೂ ಅವುಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಅದರಲ್ಲಿಯೂ ತಮ್ಮ ಸಹ ನಟರು, ನಿರ್ದೇಶಕರು ಒಳ್ಳೆಯ ಸಿನಿಮಾ ಮಾಡಿದರೆ ಆ ಬಗ್ಗೆ ತಪ್ಪದೆ ಮೆಚ್ಚುಗೆಯ ನುಡಿಗಳನ್ನು ನುಡಿಯುತ್ತಾರೆ. ಇದೀಗ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಹವಾ ಹೆಚ್ಚಿದೆ. ಸಿನಿಮಾದ ಬಗ್ಗೆ ಹಲವರು ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. 'ಕಾಂತಾರ' ಸಿನಿಮಾ ವೀಕ್ಷಿಸಿರುವ ನಟ ಸುದೀಪ್, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೂಕವಿಸ್ಮಿತಗೊಳಿಸುವ ಸಿನಿಮಾ ಕಾಂತಾರ: ಸುದೀಪ್ 'ಈ ಪತ್ರ ಬರೆಯುವಂತೆ ಮಾಡಿದ ತಂಡಕ್ಕೆ' ಎಂದು ಪತ್ರ ಆರಂಭಿಸಿರುವ ಸುದೀಪ್, ''ನಾವು ಒಳ್ಳೆಯ, ಅದ್ಭುತವಾದ ಸಿನಿಮಾಗಳನ್ನು ನೋಡಿರುತ್ತೇವೆ, ಆದರೆ ಕೆಲವು ಸಿನಿಮಾಗಳು ನಮ್ಮನ್ನು ಮೂಕವಿಸ್ಮಿತಗೊಳಿಸಿಬಿಡುತ್ತವೆ. 'ಕಾಂತಾರ' ಸಹ ಅ ರೀತಿಯದ್ದೇ ಒಂದು ಅಭೂತಪೂರ್ವ ಪ್ರಭಾ

ಫಿಲ್ಮ್‌ಫೇರ್ ಅವಾರ್ಡ್ಸ್‌ಗೆ ಇನ್ನೊಂದು ದಿನ ಬಾಕಿ; ಪ್ರಶಸ್ತಿಗಾಗಿ ನಾಮಿನೇಟ್ ಆದ ಕನ್ನಡ ಚಿತ್ರ, ನಟ-ನಟಿಯರ ಪಟ್ಟಿ

Image
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಕಾರ್ಯಕ್ರಮ ಜರುಗಿತ್ತು. ಹೀಗೆ ಈ ಬೃಹತ್ ಅವಾರ್ಡ್ಸ್ ಫಂಕ್ಷನ್ ಬೆಂಗಳೂರಿನಲ್ಲಿ ನಡೆದ ಬೆನ್ನಲ್ಲೇ ಇದೀಗ ಮತ್ತೊಂದು ಖ್ಯಾತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಮ್ಮ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಹೌದು, ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ಎಕ್ಸಿಬಿಷನ್ ಕೇಂದ್ರದಲ್ಲಿ ಜರುಗಲಿದೆ. ಈ 67ನೇ ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಳೆ ( ಅಕ್ಟೋಬರ್ 8 ) ಸಂಜೆ ನಡೆಯಲಿದ್ದು, 2020 ಮತ್ತು 2021ರಲ್ಲಿ ತೆರೆಕಂಡ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳ ವಿವಿಧ ವಿಭಾಗಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕನ್ನಡದ ಪೈಕಿ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್, ಧನಂಜಯ್ ಅಭಿನಯದ ರತ್ನನ್ ಪ್ರಪಂಚ, ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭವಾಹನ, ವಿಜಯ್ ಕುಮಾರ್ ನಿರ್ದೇಶನದ ಸಲಗ ಹಾಗೂ ದರ್ಶನ್ ಅಭಿನಯದ ರಾಬರ್ಟ್ ಸೇರಿದಂತೆ ಇನ್ನೂ ಮುಂತಾದ ಚಿತ್ರಗಳು ವಿವಿಧ ವಿಭಾಗಗಳಲ್ಲಿ ನಾಮಿನೇಟ್ ಆಗಿವೆ. ಹಾಗಿದ್ದರೆ ಕನ್ನಡದ ಯಾವ ಚಿತ್ರಗಳು ಮತ್ತು ಯಾವ ಕಲಾವಿದರು ಪ್ರಶಸ್ತಿಗಳಿಗಾಗಿ ನಾಮನಿರ್ದೇಶನಗೊಂಡಿದ್ದಾರೆ ಎಂಬುದರ ಕುರಿತಾದ ಸಂಪೂರ್ಣ ವಿವರ