2500 ಸ್ಕ್ರೀನ್‌ಗಳಲ್ಲಿ ಹಿಂದಿ 'ಕಾಂತಾರ' ರಿಲೀಸ್: ಫಸ್ಟ್ ಡೇ ಬಾಕ್ಸಾಫೀಸ್ ಲೆಕ್ಕಾಚಾರ ಏನು?
ಇತ್ತೀಚೆಗೆ ಬಾಲಿವುಡ್‌ನಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿಲ್ಲ ಎನ್ನುವ ಆರೋಪ ಇದೆ. ಬೇರೆ ಭಾಷೆಯ ಸಿನಿಮಾಗಳೇ ಡಬ್ ಆಗಿ ಅಲ್ಲಿ ಸದ್ದು ಮಾಡ್ತಿದೆ. ಪ್ರೇಕ್ಷಕರನ್ನು ಸೆಳೆಯುವ ಸಿನಿಮಾಗಳಿಲ್ಲದೇ ಥಿಯೇಟರ್‌ಗಳು ಖಾಲಿ ಹೊಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ 'ಕಾಂತಾರ' ಚಿತ್ರಕ್ಕೆ ದಾಖಲೆಯ 2500 ಸ್ಕ್ರೀನ್ ಸಿಗ್ತಿದೆ. 'KGF' ಸರಣಿ ಸಿನಿಮಾಗಳು ಬಿಟ್ಟರೆ ಕನ್ನಡದ ಯಾವುದೇ ಸಿನಿಮಾ ಹಿಂದಿಗೆ ಡಬ್ ಆಗಿ ಇಷ್ಟುದೊಡ್ಡಮಟ್ಟದಲ್ಲಿ ರಿಲೀಸ್ ಆಗಿಲ್ಲ. ಹಿಂದಿ 'ಕಾಂತಾರ' ಸ್ಕ್ರೀನ್‌ಗಳ ಲೆಕ್ಕದಲ್ಲೇ ದಾಖಲೆ ಬರೆದಿದೆ.
75 ಕೋಟಿ ಕಲೆಕ್ಷನ್ ಮಾಡಿ 'ಕಾಂತಾರ' ಸೆನ್ಸೇಷನ್
3ನೇ ವಾರದತ್ತ 'ಕಾಂತಾರ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಹಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಮುಂದುವರೆದಿದೆ. ಆಂಧ್ರದಲ್ಲೂ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಚಾರ ಮಾಡಿದ್ದಾರೆ.
ಫಸ್ಟ್ ಡೇ ಹಿಂದಿ 'ಕಾಂತಾರ' 5 ಕೋಟಿ ಕಲೆಕ್ಷನ್?
2500 ಸ್ಕ್ರೀನ್ ಅಂದರೆ ಫಸ್ಟ್ ಡೇ ದೊಡ್ಡಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಇತ್ತೀಚೆಗೆ ಅಕ್ಷಯ್ ಕುಮಾರ್ ನಟನೆಯ 'ರಕ್ಷಾಬಂಧನ್' ಸಿನಿಮಾ ಇಷ್ಟೇ ಸಂಖ್ಯೆಯ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾ
ಗಿತ್ತು. ಸಿನಿಮಾ ಫಸ್ಟ್ ಡೇ 8ರಿಂದ 10 ಕೋಟಿ ಬಾಚಿತ್ತು. ರಿಷಬ್ ಶೆಟ್ಟಿ ಚಿತ್ರವನ್ನು ಅಕ್ಷಯ್ ಕುಮಾರ್ ಚಿತ್ರಕ್ಕೆ ಹೋಲಿಸ
ಲು ಸಾಧ್ಯವಿಲ್ಲ. ಆದರೂ 'ಕಾಂತಾರ' ಕ್ರೇಜ್, ಸ್ಕ್ರೀನ್‌ಗಳ ಸಂಖ್ಯೆ ನೋಡುತ್ತಿದ್ದರೆ ಫಸ್ಟ್ ಡೇ 4ರಿಂದ 5 ಕೋಟಿ ಆದರೂ ಕಲೆಕ್ಷನ್ ಮಾಡಬೇಕು ಎನ್ನುವ ಲೆಕ್ಕಾಚಾರ ನಡೀತಿದೆ.
Comments