ಫಿಲ್ಮ್‌ಫೇರ್ ಅವಾರ್ಡ್ಸ್‌ಗೆ ಇನ್ನೊಂದು ದಿನ ಬಾಕಿ; ಪ್ರಶಸ್ತಿಗಾಗಿ ನಾಮಿನೇಟ್ ಆದ ಕನ್ನಡ ಚಿತ್ರ, ನಟ-ನಟಿಯರ ಪಟ್ಟಿ

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಕಾರ್ಯಕ್ರಮ ಜರುಗಿತ್ತು. ಹೀಗೆ ಈ ಬೃಹತ್ ಅವಾರ್ಡ್ಸ್ ಫಂಕ್ಷನ್ ಬೆಂಗಳೂರಿನಲ್ಲಿ ನಡೆದ ಬೆನ್ನಲ್ಲೇ ಇದೀಗ ಮತ್ತೊಂದು ಖ್ಯಾತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಮ್ಮ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಹೌದು, ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ಎಕ್ಸಿಬಿಷನ್ ಕೇಂದ್ರದಲ್ಲಿ ಜರುಗಲಿದೆ.

ಈ 67ನೇ ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಳೆ ( ಅಕ್ಟೋಬರ್ 8 ) ಸಂಜೆ ನಡೆಯಲಿದ್ದು, 2020 ಮತ್ತು 2021ರಲ್ಲಿ ತೆರೆಕಂಡ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳ ವಿವಿಧ ವಿಭಾಗಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕನ್ನಡದ ಪೈಕಿ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್, ಧನಂಜಯ್ ಅಭಿನಯದ ರತ್ನನ್ ಪ್ರಪಂಚ, ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭವಾಹನ, ವಿಜಯ್ ಕುಮಾರ್ ನಿರ್ದೇಶನದ ಸಲಗ ಹಾಗೂ ದರ್ಶನ್ ಅಭಿನಯದ ರಾಬರ್ಟ್ ಸೇರಿದಂತೆ ಇನ್ನೂ ಮುಂತಾದ ಚಿತ್ರಗಳು ವಿವಿಧ ವಿಭಾಗಗಳಲ್ಲಿ ನಾಮಿನೇಟ್ ಆಗಿವೆ. ಹಾಗಿದ್ದರೆ ಕನ್ನಡದ ಯಾವ ಚಿತ್ರಗಳು ಮತ್ತು ಯಾವ ಕಲಾವಿದರು ಪ್ರಶಸ್ತಿಗಳಿಗಾಗಿ ನಾಮನಿರ್ದೇಶನಗೊಂಡಿದ್ದಾರೆ ಎಂಬುದರ ಕುರಿತಾದ ಸಂಪೂರ್ಣ ವಿವರ ಕೆಳಕಂಡಂತಿದೆ ಓದಿ.
ಅತ್ಯುತ್ತಮ ಚಿತ್ರ, ನಟ ಮತ್ತು ನಟಿ ನಾಮನಿರ್ದೇಶನಗಳು
ಚಿತ್ರ: ಆಕ್ಟ್ 1978, ದಿಯಾ, ಗರುಡ ಗಮನ ವೃಷಭ ವಾಹನ, ಶಿವಾಜಿ ಸುರತ್ಕಲ್, ಬಡವ ರಾಸ್ಕಲ್ ಮತ್ತು ಸಲಗ

ನಟ: ಧನಂಜಯ್ (ಬಡವ ರಾಸ್ಕಲ್), ರಮೇಶ್ ಅರವಿಂದ್ (ಶಿವಾಜಿ ಸುರತ್ಕಲ್), ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ), ರಿಷಭ್ ಶೆಟ್ಟಿ (ಗರುಡ ಗಮನ ವೃಷಭ ವಾಹನ), ಕೃಷ್ಣ (ಲವ್ ಮಾಕ್ಟೇಲ್), ಪ್ರಜ್ವಲ್ ದೇವರಾಜ್ (ಜಂಟಲ್ ಮನ್) ಮತ್ತು ದರ್ಶನ್ (ರಾಬರ್ಟ್)

ನಟಿ: ಯಜ್ಞ ಶೆಟ್ಟಿ (ಆಕ್ಟ್ 1978), ಮಿಲನಾ ನಾಗರಾಜ್ (ಲವ್ ಮಾಕ್ಟೇಲ್), ಖುಷಿ ರವಿ (ದಿಯಾ), ಅಮೃತ ಅಯ್ಯಂಗಾರ್ (ಬಡವ ರಾಸ್ಕಲ್), ಆಶಾ ಭಟ್ (ರಾಬರ್ಟ್), ರೆಬಾ ಮೋನಿಕಾ ಜಾನ್ (ರತ್ನನ್ ಪ್ರಪಂಚ) ಮತ್ತು ಆರೋಹಿ ನಾರಾಯಣ (ಭೀಮಸೇನ ನಳಮಹಾರಾಜ)

ಅತ್ಯುತ್ತಮ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ನಾಮನಿರ್ದೇಶನ
ನಿರ್ದೇಶಕ: ಮನ್ಸೋರೆ (ಆಕ್ಟ್ 1978), ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್), ದುನಿಯಾ ವಿಜಯ್ (ಸಲಗ), ಕೃಷ್ಣ (ಲವ್ ಮಾಕ್ಟೇಲ್) ಶಂಕ್ ಗುರು (ಬಡವ ರಾಸ್ಕಲ್), ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ), ಜಡೇಶ್ ಕುಮಾರ್ ಹಂಪಿ (ಜಂಟಲ್ ಮ್ಯಾನ್)

ಸಂಗೀತ ನಿರ್ದೇಶಕ: ಚರಣ್ ರಾಜ್ (ಸಲಗ), ಬಿ ಅಜನೀಶ್ ಲೋಕನಾಥ್ (ಜಂಟಲ್ ಮ್ಯಾನ್) ಶ್ರೀಧರ್ ವಿ ಸಂಭ್ರಮ್ (ಮುಗಿಲ್ಪೇಟೆ), ಅರ್ಜುನ್ ಜನ್ಯ ಮತ್ತು ವಿ ಹರಿಕೃಷ್ಣ (ರಾಬರ್ಟ್), ವಾಸುಕಿ ವೈಭವ್ (ಬಡವ ರಾಸ್ಕಲ್), ರಘು ದೀಕ್ಷಿತ್ (ಲವ್ ಮಾಕ್ಟೇಲ್)


Comments

Popular posts from this blog

ಇಂದಿಗೂ ಮುರಿಯಲಾಗದ ವಿಕ್ರಾಂತ್ ರೋಣ ದಾಖಲೆಗಳು ಯಾವಾಗ ಗೊತ್ತಾ ⁉️ ಟ್ವಿಟ್ಟರ್ ಇವರ ಅಡ್ಡ ⁉️

Kiccha 46 : ಹೀರೋಯಿನ್ ಇವರೇ ನೋಡಿ ( ಮತ್ತೊಂದು ನ್ಯಾಷನಲ್ ಕ್ರಶ್ ಪಕ್ಕಾ ನಾ ) ⁉️ ಕಿಚ್ಚ 46 ವೈರಲ್ ಸುದ್ದಿ

Kiccha 46 : ಕಿಚ್ಚ 46 ಚಿತ್ರಕ್ಕೆ ಈ ಅಂದದ ಬಾಲೆಯೇ ನಾಯಕಿ.. ಈ ಸುಂದರಿ ಯಾರು ಗೊತ್ತೇ?