Kannada Rajyotsava 2022 : ಕನ್ನಡ ರಾಜ್ಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು ?

ಅಲ್ಲಲ್ಲಿ ಚದುರಿ ಹೋಗಿರುವ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಒಂದು ರಾಜ್ಯವನ್ನಾಗಿ ಘೋಷಣೆ ಮಾಡಿದ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.
ಕರ್ನಾಟಕ ರಾಜ್ಯದಲ್ಲಿ 67ನೇ ವರ್ಷದ ಕನ್ನಡ ರಾಜ್ಯೋತ್ಸವ(Kannada Rajyotsava 2022) ಆಚರಣೆಗೆ ದಿನಗಣನೆ ಶುರುವಾಗಿದೆ.ನಾಡಹಬ್ಬವನ್ನು ಪ್ರತಿವರ್ಷ ನವೆಂಬರ್‌ 1ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು 1956ರ ನವೆಂಬರ್‌ 1ರಂದು ರೂಪುಗೊಂಡ ಸಂಕೇತವಾಗಿ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವನ್ನು ಆಚರಿಸಲಾಗುತ್ತದೆ.ಅಲ್ಲಲ್ಲಿ ಚದುರಿ ಹೋಗಿರುವ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಒಂದು ರಾಜ್ಯವನ್ನಾಗಿ ಘೋಷಣೆ ಮಾಡಿದ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.

ಕನ್ನಡ ರಾಜ್ಯೋತ್ಸವವನ್ನು ವಿಶ್ವದಾದ್ಯಂತ ಕನ್ನಡಿಗರು ನಮ್ಮ ನಾಡು ನುಡಿ ಮೆರೆಯುವುದರ ಮೂಲಕ ಸಂಭ್ರಮದಿಂದ ಆಚರಿಸುತ್ತಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನವನ್ನು ಕೂಡ ಮಾಡಲಾಗುತ್ತದೆ. ಕನ್ನಡದ ಕುಲಪುರೋಹಿತ ಎಂದೇ ಖ್ಯಾತಿಯಾದ ಆಲೂರು ವೆಂಕಟರಾಯರು 1904ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಹುಟ್ಟು ಹಾಕಿದ್ದರು. ಭಾರತವು ಗಣರಾಜ್ಯವಾದ ನಂತರದ ದಿನಗಳಲ್ಲಿ ದೇಶದಲ್ಲಿನ ವಿವಿಧ ಪ್ರಾಂತ್ಯಗಳು ಅಲ್ಲಿನ ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ದಕ್ಷಿಣ ಭಾರತದಲ್ಲಿ ರಾಜರ ಆಳ್ವಿಕೆಯಲ್ಲಿ ಇದ್ದ ಹಲವಾರು ಸಂಸ್ಥಾನಗಳು ರಾಜ್ಯಗಳಾಗಿ ರೂಪುಗೊಂಡಿದ್ದವು. 1956 ನವೆಂಬರ್‌ 1ರಂದು ಮದ್ರಾಸ್‌, ಮುಂಬಯಿ, ಹೈದರಬಾದ್‌ ಪ್ರಾಂತ್ಯದಲ್ಲಿ ಕನ್ನಡ ಮಾತನಾಡುವ ಪ್ರಾಂತ್ಯಗಳು ಒಟ್ಟು ಸೇರಿ ಮೈಸೂರು ರಾಜ್ಯವಾಗಿ ಹುಟ್ಟಿಗೊಂಡವು. ಹಾಗೆ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎನ್ನುವುದನ್ನು ಹೊಸದಾಗಿ ರೂಪುಗೊಂಡು, ಮೈಸೂರು ಪ್ರಾಂತ್ಯವೆಂದು ಕರೆಯಲಾಯಿತು .ಮೈಸೂರು ರಾಜ್ಯವನ್ನು ಆರಂಭದಲ್ಲಿ ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್‌ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಳ್ಳಲಾಯಿತು. ಆದರೆ ಆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜನರ ತರ್ಕದಿಂದಾಗಿ ರಾಜ್ಯದ ಹೆಸರು ನವೆಂಬರ್‌ 1 1973 ರಂದು “ಕರ್ನಾಟಕ” ಎಂದು ಬದಲಾಗುತ್ತದೆ.

ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ದೇವರಾಜ ಅರಸರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದ ಏಕೀಕೃರಣದ ಮನ್ನಣೆ ಆಗಿನ ಕಾಲದ ಹೆಮ್ಮೆಯ ಕವಿ ಹಾಗೂ ಲೇಖಕರಾದ ಅನಕೃ, ಕೆ.ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗರ್‌ , ಎ.ಎನ್.ಕೃಷ್ಣರಾವ್‌ ಮತ್ತು ಬಿ.ಎಂ. ಶ್ರೀಕಂಠಯ್ಯ ಅವರಿಗೆ ಸಲ್ಲುತ್ತದೆ

ಕನ್ನಡ ರಾಜ್ಯೋತ್ಸವ ದಿನವನ್ನು ಕರ್ನಾಟಕದಾದ್ಯಂತ ಬಹಳಷ್ಟೂ ಆನಂದದಿಂದ ಆಚರಿಸಲಾಗುತ್ತದೆ. ರಾಜ್ಯದೆಲ್ಲೆಡೆ ಕೆಂಪು ಮತ್ತು ಹಳದಿ ಬಣ್ಣದಿಂದ ಮಾಡಲ್ಪಟ್ಟ ಕನ್ನಡ ಧ್ವಜವನ್ನು ಹಾರಿಸುವುದರ ಜೊತೆಗೆ ಕನ್ನಡ ನಾಡಗೀತೆಯಾದ “ಜಯ ಭಾರತ ಜನನಿಯ ತನುಜಾತೆ” ಹಾಡನ್ನು ಹಾಡಲಾಗುತ್ತದೆ. ಸರಕಾರಿ ಕಛೇರಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಕನ್ನಡ ತಾಯಿ ಭುವನೇಶ್ವರಿ ಪೋಟೊ ಇಟ್ಟು ಪೂಜಿಸುತ್ತಾರೆ. ರಾಜ್ಯೋತ್ಸವನ್ನು ಕರ್ನಾಟಕದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಎನ್ನುವ ಧರ್ಮದ ಬೇಧವಿಲ್ಲದೆ ಎಲ್ಲರೂ ಒಟ್ಟಿಗೆ ಸೇರಿ ಆಚರಿಸುತ್ತಾರೆ. ಅಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಸಂಸ್ಥೆಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವನ್ನು ಆಚರಿಸುತ್ತಾರೆ.Click Here

Comments

Popular posts from this blog

ಇಂದಿಗೂ ಮುರಿಯಲಾಗದ ವಿಕ್ರಾಂತ್ ರೋಣ ದಾಖಲೆಗಳು ಯಾವಾಗ ಗೊತ್ತಾ ⁉️ ಟ್ವಿಟ್ಟರ್ ಇವರ ಅಡ್ಡ ⁉️

Kiccha 46 : ಹೀರೋಯಿನ್ ಇವರೇ ನೋಡಿ ( ಮತ್ತೊಂದು ನ್ಯಾಷನಲ್ ಕ್ರಶ್ ಪಕ್ಕಾ ನಾ ) ⁉️ ಕಿಚ್ಚ 46 ವೈರಲ್ ಸುದ್ದಿ

Kiccha 46 : ಕಿಚ್ಚ 46 ಚಿತ್ರಕ್ಕೆ ಈ ಅಂದದ ಬಾಲೆಯೇ ನಾಯಕಿ.. ಈ ಸುಂದರಿ ಯಾರು ಗೊತ್ತೇ?