ಜೀ ಕನ್ನಡದಲ್ಲಿ ಅಕ್ಟೋಬರ್ 15 ರಂದು ವಿಕ್ರಾಂತ್ ರೋಣ ಚಿತ್ರದ ಅದ್ಧೂರಿ World Television premiere
ಇದೀಗ ಕನ್ನಡದ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡ ಇದೇ ಅಕ್ಟೋಬರ್ 15 ಶನಿವಾರ ರಾತ್ರಿ 7.30ಕ್ಕೆ ಈ ಸಿನಿಮಾವನ್ನು ಅದ್ಧೂರಿಯಾಗಿ World Television premiere ಮಾಡಲಿದೆ. ಏಕಕಾಲಕ್ಕೆ ಹಲವಾರು ಭಾಷೆಗಳಲ್ಲಿ ತೆರೆಕಂಡು ಅದ್ಭುತ ಯಶಸ್ಸುಗಳಿಸಿರುವ ಈ ಸಿನಿಮಾ ಕೂಡ ಕನ್ನಡ ಚಿತ್ರರಂಗದ ಶಕ್ತಿ ಪ್ರದರ್ಶನ ಮಾಡಿದ ಶ್ರೇಯಸ್ಸನ್ನು ತನ್ನದಾಗಿಸಿಕೊಂಡಿದೆ.ರಂಗೀತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಇದರ ನಿರ್ದೇಶನದ ಜವಾಬ್ಧಾರಿ ಹೊತ್ತು ಯಶಸ್ವಿಯಾಗಿದ್ದರೇ ಜಾಕ್ ಮಂಜು ಅವರು ಹಣಹೂಡಿಕೆ ಮಾಡಿದ್ದಾರೆ. ಚಂದನವನದ ಸದ್ಯದ ಟ್ರೆಂಡ್ ಸೆಟ್ಟಿಂಗ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಹಾಗು ವಿಲಿಯಮ್ ಡೇವಿಡ್ ಅವರ ಭರ್ಜರಿ ಛಾಯಾಗ್ರಹಣವಿದೆ. ಬಹುಕೋಟಿ ವೆಚ್ಚದ ಈ ಚಿತ್ರದ ಹಂಚಿಕೆ ಜವಾಬ್ಧಾರಿಯನ್ನು ದೇಶದ ಅತಿದೊಡ್ಡ ಮನರಂಜನಾ ಸಂಸ್ಥೆಯಾದ ಜೀ ಸ್ಟುಡಿಯೋಸ್ ವಹಿಸಿದಿದ್ದು ವಿಶೇಷ . ಇನ್ನು ವಿಕ್ರಾಂತ್ ರೋಣ ಚಿತ್ರ ಶ್ರೀಮಂತ ತಾರಾಗಣಕ್ಕೆ ಸಾಕ್ಷಿಯಾಗಿದ್ದು ಕಿಚ್ಚ ಸುದೀಪ್ ಸೇರಿದಂತೆ ನಿರೂಪ್ ಭಂಡಾರಿ , ನೀತಾ ಅಶೋಕ್ , ಜಾಕ್ವಲಿನ್ ಫರ್ನಾಂಡಿಸ್ ಹಾಗು ಇನ್ನು ಅನೇಕರು ಇದರ ಭಾಗವಾಗಿದ್ದಾರೆ. ಅಷ್ಟೇ ಅಲ್ಲದೆ ವಿಶ್ವದ ಅತಿದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಕನ್ನಡದ ಬಾವುಟ ಹಾರಿಸಿದ ಹೆಮ್ಮೆಯ ವಿಷಯಕ್ಕೆ ಪಾತ್ರವಾಗಿದೆ ಈ ಚಿತ್ರತಂಡ.
Comments