ಕೆಜಿಎಫ್' ನಿರ್ಮಾಪಕರ ಜೊತೆ 'ಕಿಚ್ಚ' ಸುದೀಪ್ ಸಿನಿಮಾ ? ದೀಪಾವಳಿಗೇ ಅಪ್ಡೇಟ್ ಬರುತ್ತೆ



ಚಿತ್ರರಂಗದಲ್ಲಿ ಸದ್ಯ ಸಿಕ್ಕಾಪಟ್ಟೆ ಹೈಫ್ ಕ್ರಿಯೇಟ್ ಮಾಡಿರುವ ಚಿತ್ರ `ವಿಕ್ರಾಂತ್ ರೋಣ’. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ, ಈ ವೇಳೆ ತಮ್ಮ ಮುಂದಿನ ಚಿತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ. ಇಂಡಿಯನ್ ಫಿಲ್ಮ್ಂ ಮೇಕರ್ ವೆಂಕಟ್ ಪ್ರಭು ಜತೆ ಸುದೀಪ್ ಸಾಥ್ ನೀಡಲಿದ್ದಾರೆ.

ಸಿನಿಮಾರಂಗದಲ್ಲಿ ಅಭಿನಯ ಚಕ್ರವರ್ತಿ ಆಗಿ ರಾರಾಜಿಸುತ್ತಿರುವ ಕಿಚ್ಚ ಸುದೀಪ್ ಗಾಂಧಿನಗರದಲ್ಲಿ ಮಾತ್ರವಲ್ಲ ಪರಭಾಷೆ, ಹೊರದೇಶದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಗಡಿ ದಾಟಿ ಬೆಳೆದಿರುವ ಬಹುಮುಖ ಪ್ರತಿಭೆ ಕಿಚ್ಚ ಸುದೀಪ್ ಸದ್ಯ ʻವಿಕ್ರಾಂತ್ ರೋಣʼ ಗ್ರ್ಯಾಂಡ್‌ ಆಗಿ ರಿಲೀಸ್ ಆಗುವುದಕ್ಕೆ ದಿನಗಣನೆ ಶುರುವಾಗಿದೆ. ೩ಡಿ ರೂಪದಲ್ಲಿ ಬಹುಭಾಷೆಗಳಲ್ಲಿ ಇದೇ ಜುಲೈ 28ಕ್ಕೆ ತೆರೆಗೆ ಬರಲಿದೆ. `ವಿಕ್ರಾಂತ್ ರೋಣ’ ಚಿತ್ರದ ನಂತರ ಕಿಚ್ಚನ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಸ್ವತಃ ಸುದೀಪ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ತಮಿಳಿನ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ವೆಂಕಟ್ ಪ್ರಭು ಈಗ ಕಿಚ್ಚ ಸುದೀಪ್‌ಗೆ ಡೈರೆಕ್ಷನ್ ಮಾಡಲು ರೆಡಿಯಾಗಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿರುವ ವೆಂಕಟ್ ಪ್ರಭು ಈಗ ಭಿನ್ನ ಕಥೆಯೊಂದನ್ನ ರೆಡಿ ಮಾಡಿ, ಈಗಾಗಲೇ ಕಿಚ್ಚನಿಗೆ ಸ್ಟೋರಿ ಹೇಳಿದ್ದಾರೆ. ಕಥೆ ಕೇಳಿ ಸುದೀಪ್ ಕೂಡ ಓಕೆ ಅಂದಿದ್ದಾರೆ.

ʻವಿಕ್ರಾಂತ್ ರೋಣʼ ರಿಲೀಸ್‌ಗೆ ರೆಡಿಯಿದೆ ಇದಾದ ಬಳಿಕ ಬಿಗ್ ಬಾಸ್ ಶೋ ಆಗಸ್ಟ್ 6ರಿಂದ ಶುರುವಾಗಲಿದೆ. ಬಳಿಕ ವೆಂಕಟ್ ಪ್ರಭು ನಿರ್ದೇಶನದ ಹೊಸ ಚಿತ್ರಕ್ಕೆ ಸುದೀಪ್ ಸೇರಿಕೊಳ್ಳಲಿದ್ದಾರೆ.ಅಕ್ಟೋಬರ್‌ನಲ್ಲಿ ಶೂಟಿಂಗ್‌ ಶುರುವಾಗಲಿದೆ. ಜತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಕಿಚ್ಚನ ಕೈಯಲ್ಲಿದೆ.


 

Comments

Popular posts from this blog

ಕಿಚ್ಚ ಸುದೀಪ್ 'ಬಿಲ್ಲ ರಂಗ ಬಾಷಾ' ಚಿತ್ರಕ್ಕೆ ನಾಯಕಿ ಯಾರು?

ಜೀ ಕನ್ನಡದಲ್ಲಿ ಅಕ್ಟೋಬರ್ 15 ರಂದು ವಿಕ್ರಾಂತ್ ರೋಣ ಚಿತ್ರದ ಅದ್ಧೂರಿ World Television premiere

Pro Kabaddi League: ತೆಲುಗು ಟೈಟಾನ್ಸ್‌ಗೆ ಡಿಚ್ಚಿ ಹೊಡೆದ ಬೆಂಗಳೂರಿನ ಗೂಳಿಗಳು..!